ದಿ ಬಿಗ್‌ ಬ್ಯಾಂಗ್‌ ಧಿಯರಿ ಒಂದು ಅಮೆರಿಕನ್‌ ಸಾಂದರ್ಭಿಕ ಹಾಸ್ಯ (ಸಿಚುಯೇಷನ್‌ ಕಾಮಿಡಿ)ಸರಣಿ.ಚಕ್‌ ಲೊರ್‌ ಮತ್ತು ಬಿಲ್ ಪ್ರ್ಯಾಡಿ ಇದರ ಸೃಷ್ಟಿಕರ್ತ ಮತ್ತು ಕಾರ್ಯಕಾರಿ ನಿರ್ಮಾಪಕರು. 2007ರ ಸೆಪ್ಟೆಂಬರ್‌ 24ರಂದು ವಾಹಿನಿಯಲ್ಲಿ ಇದರ ಪ್ರಥಮ ಪ್ರದರ್ಶನವಾಯಿತು. ಈ ಹಾಸ್ಯ ಸರಣಿಯು ಕ್ಯಾಲಿಫೊರ್ನಿಯಾದ ಪಸಡೆನಾದಲ್ಲಿ ಚಿತ್ರೀಕರಣಗೊಂಡಿತ್ತು. ಈ ಕ್ಯಾಲ್ಟೆಕ್‌ (ಕ್ಯಾಲಿಫೊರ್ನಿಯಾ ಇನ್ಸ್ಟಿಟ್ಯುಟ್‌ ಆಫ್‌ ಟೆಕ್ನಾಲಜಿ)ನ ಇಬ್ಬರು ಅಸಾಧಾರಣ ಪುರುಷರು - ಒಬ್ಬ ಲಿಯೊನಾರ್ಡ್‌ ಎಂಬ ಪ್ರಾಯೋಗಿಕ ಭೌತಶಾಸ್ತ್ರಜ್ಞ (ಲಿಯೊನಾರ್ಡ್‌ ಹಫ್‌ಸ್ಟೇಟರ್‌), ಇನ್ನೊಬ್ಬ ಷೆಲ್ಡನ್‌ ಎಂಬ ತಾತ್ವಿಕ ಭೌತಶಾಸ್ತ್ರಜ್ಞ - ಈ ಇಬ್ಬರೂ(ಷೆಲ್ಡನ್‌ ಕೂಪರ್‌); ಮನರಂಜನಾ ವೃತ್ತಿಯ ಆಕಾಂಕ್ಷೆಯುಳ್ಳ ಪೆನ್ನಿ ಎಂಬ ಹೊಂಬಣ್ಣದ ಕೂದಲುಳ್ಳ ಆಕರ್ಷಕ ಪರಿಚಾರಿಕೆಯೊಂದಿಗೆ ಒಂದೇ ಸೂರಿನಡಿ ಬದುಕುವುವುದೇ ಈ ಸರಣಿಯ ಕಥಾವಸ್ತು. ಪೆನ್ನಿಯ ಸಾಮಾಜಿಕ ಜಾಣ್ಮೆ ಮತ್ತು ಸಾಮಾನ್ಯ ಜ್ಞಾನಕ್ಕೆ ತದ್ವಿರುದ್ಧವಾದ ಲಿಯೊನಾರ್ಡ್‌ ಮತ್ತು ಷೆಲ್ಡನ್‌ರ 'ಗೀಕು'ತನ ಮತ್ತು ಬುದ್ಧಿಶಕ್ತಿಯ ವೈರುಧ್ಯಗಳೇ ಹಾಸ್ಯ ಕಾರಂಜಿಯ ಬುಗ್ಗೆಗೆ ಎಡೆಮಾಡಿಕೊಡುತ್ತವೆ. ಇವರಿಬ್ಬರ ಸ್ನೇಹಿತರಾದ, ಅದೇ ಮಟ್ಟದ ಗೀಕು ಸ್ವಭಾವದ ಹೊವರ್ಡ್‌ ಮತ್ತು ರಾಜೀಶ್‌ರದ್ದು ಕೂಡಾ ಇಲ್ಲಿ ಪ್ರಮುಖ ಪಾತ್ರ. ವಾರ್ನರ್ ಬ್ರದರ್ಸ್‌ ಟೆಲಿವಿಷನ್‌ ಮತ್ತು ಚಕ್‌ ಲೊರ್‌ ಪ್ರೊಡಕ್ಷನ್ಸ್‌ ಸಂಸ್ಥೆಗಳು ಈ ಸರಣಿಯನ್ನು ನಿರ್ಮಿಸಿದವು. 2009ರ ಮಾರ್ಚ್‌ ತಿಂಗಳಲ್ಲಿ ದಿ ಬಿಗ್‌ ಬ್ಯಾಂಗ್‌ ಧಿಯರಿ ವಾಹಿನಿಯಲ್ಲಿ 3ನೆಯ ಮತ್ತು 4ನೆಯ ಭಾಗಕ್ಕಾಗಿ ಪರಿಷ್ಕರಿಸಲಾಯಿತೆಂದು ವರದಿಯಾಗಿತ್ತು. 2009ರ ಆಗಸ್ಟ್‌ ತಿಂಗಳಲ್ಲಿ ಈ ಸಾದರ್ಭಿಕ ಹಾಸ್ಯ ಸರಣಿಯು ಅತ್ಯುತ್ತಮ ಹಾಸ್ಯ ಸರಣಿ ಎಂದು TCAಪ್ರಶಸ್ತಿಯನ್ನು ಗಳಿಸಿತು. ಹಾಸ್ಯ ಸಾಧನೆಗಾಗಿ ಜಿಮ್‌ ಪಾರ್ಸನ್ಸ್‌ರಿಗೆ ವೈಯಕ್ತಿಕ ಪ್ರಶಸ್ತಿ ದೊರಕಿತು. ಚಕ್‌ ಲೊರ್‌ನ ಇನ್ನೊಂದು ಸರಣಿ ಟೂ ಅಂಡ್‌ ಎ ಹಾಫ್‌ ಮೆನ್‌ ನಿರ್ಮಣವಾದ ನಂತರ ದಿ ಬಿಗ್‌ ಬ್ಯಾಂಗ್‌ ಧಿಯರಿ ಪ್ರತಿ ಸೋಮವಾರ 9:30ಕ್ಕೆ 2/ಪ್ರಸಾರ ಅರಂಭಿಸಿತು{} == ಪ್ರಮುಖ ಪಾತ್ರವರ್ಗ == ಲಿಯೊನಾರ್ಡ್‌ ಹಫ್‌ಸ್ಟೇಟರ್‌, .. ಪಾತ್ರದಲ್ಲಿ ಜಾನಿ ಗ್ಯಾಲೆಕಿ - ಲಿಯೊನಾರ್ಡ್‌ ಒಬ್ಬ ಪ್ರಾಯೋಗಿಕ ಭೌತವಿಜ್ಞಾನಿ.ತನ್ನ 24ನೆಯ ವಯಸ್ಸಿನಲ್ಲಿ .. ಪಡೆದಿದ್ದ ಈತನ 173 ಆಗಿತ್ತು. ತನ್ನ ಸಹೋದ್ಯೋಗಿ ಹಾಗೂ ಸ್ನೇಹಿತ ಷೆಲ್ಡನ್‌ ಕೂಪರ್‌ನೊಂದಿಗೆ ಮಹಡಿಮನೆ (ಅಪಾರ್ಟ್ಮೆಂಟ್‌)ಯಲ್ಲಿ ಈತನು ವಾಸಿಸುತ್ತಾನೆ. ಈತನು ಸರಣಿಯ ಸಾಚಾ ವ್ಯಕ್ತಿ. ಲಿಯೊನಾರ್ಡ್‌ ಮತ್ತು ಆತನ ನೆರೆಯವಳಾದ ಪೆನ್ನಿಯೊಂದಿಗೆ ಪ್ರಣಯದ ಸನ್ನಿವೇಶಗಳನ್ನು ತುಂಬಿಸಿ ಸರಣಿಯ ಚಿತ್ರಕಥೆಯನ್ನು ಹಣೆಯಲಾಗಿದೆ. ಅವರಿಬ್ಬರ ಬಗೆಹರಿಸಲಾಗದ ಲೈಂಗಿಕೋದ್ವೇಗವು ಈ ನಾಟಕದ ಜೀವಾಳ. ಷೆಲ್ಡನ್‌ ಕೂಪರ್‌, .. ಪಾತ್ರದಲ್ಲಿ ಜಿಮ್‌ ಪಾರ್ಸನ್ಸ್‌ - ಷೆಲ್ಡನ್‌ ಮೂಲತಃ ಈಸ್ಟ್‌ ಟೆಕ್ಸಸ್‌ನವನಾಗಿದ್ದು, ಅದ್ಭುತ ಗುಣಗಳುಳ್ಳ ಬಾಲಕನಾಗಿದ್ದನು. ಈತನು ಐದನೆಯ ಗ್ರೇಡ್‌ ಪೂರ್ಣಗೊಳಿಸಿದ ಕೂಡಲೆ ತನ್ನ 11ನೆಯ ವಯಸ್ಸಿನಲ್ಲಿ ಕಾಲೇಜ್‌ ವ್ಯಾಸಂಗವನ್ನು ಆರಂಭಿಸಿದನು. ಒಬ್ಬ ತಾತ್ವಿಕ ಭೌತಶಾಸ್ತ್ರಜ್ಞನಾಗಿ, ಈತನು ಒಂದು ಸ್ನಾತಕೋತ್ತರ ಪದವಿ, ಎರಡು ..ಗಳನ್ನು ಹೊಂದಿದ್ದನು. ಈತನ 187 ಆಗಿತ್ತು. ಈತ ತನ್ನ ದಿನಚರಿಗೆ ಕಟಿಬದ್ಧ.ವ್ಯಂಗ್ಯ,ಕಟಕಿ ಮತ್ತು ಹಾಸ್ಯಗಳನ್ನು ಅರ್ಥಮಾಡಿಕೊಳ್ಳಲು ಅಶಕ್ಯನಾಗಿಯೂ, ನಮ್ರತೆಯ ಕೊರತೆಯ ಕೂಪದಂತೆಯೂ ಕಂಡುಬರುತ್ತಾನೆ. ಈತನ ಪಾತ್ರದ ಹಾಸ್ಯ ವೈಶಿಷ್ಟ್ಯಗಳೇ ಹಲವಾರು ಕಂತುಗಳ ಕೇಂದ್ರ ಬಿಂದುವಾಗಿವೆ. ಷೆಲ್ಡನ್‌ ಮತ್ತು ಲಿಯೊನಾರ್ಡ್‌ ಹಫ್‌ಸ್ಟೇಟರ್‌ ಮಹಡಿ ಮನೆಯೊಂದರಲ್ಲಿ ವಾಸಿಸುತ್ತಾರೆ. ತಮ್ಮ ಬಾಲ್ಯಾವಸ್ಥೆಯಲ್ಲಿದ್ದಾಗ, ದಿನದ ಅಂತ್ಯದಲ್ಲಿ ಷೆಲ್ಡನ್‌ ಅವನ ಕಾಲ್ಪನಿಕ ಸ್ನೇಹಿತರನ್ನು ಮನೆಗೆ ಕಳುಹಿಸುತ್ತಿದ್ದ ಎಂದು ಆತನ ಅವಳಿ ಸೋದರಿಯು ಹೇಳುತ್ತಾಳೆ."ಅವರೆಲ್ಲರೂ ಸ್ನೇಹಿತರಲ್ಲ, ಅವರು ಕಾಲ್ಪನಿಕ ಸಹೋದ್ಯೋಗಿಗಳು" ಎಂಬುದು ಷೆಲ್ಡನ್‌ ಇದಕ್ಕೆ ನೀಡುವ ಮಾರುತ್ತರ. ಪೆನ್ನಿ ಪಾತ್ರದಲ್ಲಿ ಕೇಲೀ ಕ್ವೋಕೊ - ಈಕೆ ಷೆಲ್ಡನ್‌ ಮತ್ತು ಲಿಯೊನಾರ್ಡ್‌ರ ಗೆಳತಿ. ಈಕೆ ಇವರಿಬ್ಬರೂ ಇರುವ ಮನೆಯ ಒಂದು ಭಾಗದಲ್ಲಿ ವಾಸಿಸುತ್ತಾಳೆ.ಸ್ಥಳೀಯ ಚೀಸ್ ಕೇಕ್‌ ತಯಾರಿಸುವ ಉದ್ದಿಮೆಯೊಂದರಲ್ಲಿ ಪರಿಚಾರಿಕೆಯಾಗಿದ್ದು ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುತ್ತಾಳೆ. ತನ್ನ ಕೊನೆಯ ಹೆಸರು ಬಹಿರಂಗಗೊಳಿಸದೆ ಇರುವುದು ಇದೊಂದೇ ಪ್ರಮುಖ ಪಾತ್ರ. ನೆಬ್ರಸ್ಕಾ ರಾಜ್ಯದ ಒಮಾಹದಲ್ಲಿನ ತೋಟದ ಮನೆಯೊಂದರಲ್ಲಿ ಈಕೆಯನ್ನು ಬೆಳೆಸಲಾಯಿತು. ಈಕೆ ತನ್ನ ನೀರಸ ನೆರೆಹೊರೆಯವರ ಆಸಕ್ತಿಯ ಕ್ಷೇತ್ರಗಳ ವಿಚಾರದಲ್ಲಿ ಬಹುಮಟ್ಟಿಗೆ ಗಮನ ಹರಿಸದಿರುವುದುದನ್ನು ಹಾಸ್ಯ ಸನ್ನಿವೇಶಕ್ಕಾಗಿ ದುಡಿಸಿಕೊಳ್ಳಲಾಗಿದೆ. ಷೆಲ್ಡನ್‌ನೊಂದಿಗೆ ಈಕೆಯದು ಬಹುಮಟ್ಟಿಗೆ ಜಗಳಗಂಟಿತನದ ಸ್ನೇಹವಿತ್ತು. ಹಾಸ್ಯ ಸನ್ನಿವೇಶಗಳನನ್ನು ಸೃಷ್ಟಿಸಲು, ಇವರಡೂ ಪಾತ್ರಗಳು ಸುಮ್ಮನೆ ಪರಸ್ಪರ ತಿರುಗಿ ಬೀಳುಂಥ ಸನ್ನಿವೇಶ ನರ್ಮಣ ಮಾಡಲಾಗಿದೆ. ಹೊವರ್ಡ್‌ ವೊಲೊವಿಟ್ಜ್‌, .. ಅಗಿ ಸೈಮನ್‌ ಹೆಲ್ಬರ್ಗ್‌ ಈತನು ಒಬ್ಬ (ಇಂಜಿನಿಯರ್‌); ತನ್ನ ತಾಯಿಯೊಂದಿಗೆ ವಾಸವಾಗಿದ್ದು, ಈ ಇವರು ಜ್ಯೂಯಿಷ್ ಮತಾವಲಂಬಿಗಳಾಗಿರುತ್ತಾರೆ.ಜ್ಯೂಯಿಶ್ ಷೆಲ್ಡನ್, ಲಿಯೊನಾರ್ಡ್‌ ಮತ್ತು ರಾಜ್‌ ಗಿಂತಲೂ ಭಿನ್ನವಾಗಿ, ಹೊವರ್ಡ್‌ . ಹೊಂದಿರುವುದಿಲ್ಲ. ತಾನು MITಯಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವೆನೆಂದು ಅವನು ಸಮರ್ಥಿಸಿಕೊಳ್ಳುತ್ತಾನೆ. ಅವನು ಅಶಿಷ್ಟ ವಲ್ಲದ ಮಾತುಗಳನ್ನಾಡಿ, ತಾನು ಹುಡುಗಿಯರ ಒಡನಾಟವನ್ನು ಅತಿಯಾಗಿ ಬಯಸುವ ಮನುಷ್ಯನೆಂಬ ಭ್ರಮೆಯಲ್ಲಿರುತ್ತಾನೆ. ಈತನ ನಡವಳಿಕೆಗೆ ಪೆನ್ನಿ ಸೂಕ್ತವಾದ ಪ್ರತಿಕ್ರಿಯೆ ನೀಡುವುದಿಲ್ಲ. ಆದರೂ ಬೇರೇ ಹುಡುಗಿಯರ ಗಮನವನ್ನು ತನ್ನತ್ತ ಸೆಳೆಯಲು ಸಫಲನಾಗುತ್ತಾನೆ. ರಾಜೇಶ್‌ ಕೂತ್ರಪಲ್ಲಿ, .. ಪಾತ್ರದಲ್ಲಿ ಕುನಾಲ್‌ ನಯ್ಯರ್‌ - ರಾಜೇಶ್ ಮೂಲತಃ ಭಾರತ ದೇಶದ ಹೊಸದಿಲ್ಲಿಯವನಾಗಿದ್ದು, ಕ್ಯಾಲ್ಟೆಕ್‌ನಲ್ಲಿ ಕಣ ಖಭೌತ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಾನೆ. ಈತನು ಹುಡುಗಿಯರ ಮುಂದೆ ಹುಡುಗಿಯರನ್ನು ಕಂಡರೆ ಮೂಕನೇನೋ ಎಂಬಷ್ಟು ಸಂಕೋಚ ಸ್ವಭಾವದವನಾಗಿರುತ್ತಾನೆ. ಪೆನ್ನಿಯನ್ನು ಒಳಗೊಂಡ ದೃಶ್ಯ ಮೇಲಿಂದ ಮೇಲೆ ಬರುವುದು ಇದಕ್ಕೊಂದು ಕಾರಣ. ಸಂಭಾಷಣೆ ದೂರ ದೂರಕ್ಕೊಂದು ಬರುವುದರಿಂದ ಉಳಿದ ಪಾತ್ರಗಳು ಈತನದನ್ನು ಗೌಣವಾಗಿಸಿ ಮೂಲೆಗೆ ದೂಡುತ್ತವೆ. ಮದ್ಯ ಮತ್ತು ಪ್ರಾಯೋಗಿಕ ಔಷಧಗಳು ಇವನ ಸಂಕೋಚ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತದೆ.ಆದಾಗ್ಯೂ ಒಂದು ಸಂದರ್ಭದಲ್ಲಿ ಇವೆರಡರ ನೆರವಿಲ್ಲದೇ ಪೆನ್ನಿಯಲ್ಲಿ ಕ್ಷಮೆ ಯಾಚಿಸುತ್ತಾನೆ. ಜನಾಂಗೀಯತೆಯನ್ನು ಬಹಳ ಚುರುಕಾಗಿ ಗ್ರಹಿಸಬಲ್ಲನು. ಡಾ. ಮತ್ತು ಶ್ರೀಮತಿ . ಕೂತ್ರಪಲ್ಲಿ ಎಂದು ಪರಿಚಯವಾಗಿರುವ ಆತನ ಪೋಷಕರು ವೆಬ್‌ಕ್ಯಾಮ್‌ ಮೂಲಕ ಕಾಣಸಿಗುತ್ತಾರೆ. ಆತನ ತಂದೆ ಸ್ತ್ರೀರೋಗತಜ್ಞ. [[ಬೆಂಟ್ಲೆ|ತಾನು ಭಾರತ]]ದಲ್ಲಿ ಬಡತನದ ನೆರಳಲ್ಲಿ ಈತನನ್ನು ಬೆಳೆಸಲಾಯಿತೆಂಬುದರ ಪರಿಯನ್ನು ಆಗಿಂದಾಗ್ಗೆ ಅವನು ಹೇಳಿಕೊಳ್ಳುತ್ತಿರುತ್ತಾನೆ. ಲೆಸ್ಲೀ ವಿಂಕ್ಲ್‌, .. ಪಾತ್ರದಲ್ಲಿ ಸಾರಾ ಗಿಲ್ಬರ್ಟ್‌ (ಭಾಗ 1ರಿಂದಲೂ ಪುನರಾವರ್ತಿತ) ಈಕೆ ಒಬ್ಬ ಪ್ರಾಯೋಗಿಕ ಭೌತಶಾಸ್ತ್ರಜ್ಞೆ. ಸರಣಿಯಲ್ಲಿ ಈಕೆ ಆಗೊಮ್ಮೆ ಈಗೊಮ್ಮೆ ಹೊವರ್ಡ್‌ ಮತ್ತು ಲಿಯೊನಾರ್ಡ್‌ರೊಂದಿಗೆ ಮಲಗುತ್ತಾಳೆ. ಷೆಲ್ಡನ್‌ನೊಂದಿಗೆ ಹೊಂದಿಕೊಂಡು ಹೋಗಲಾರದೆ ಪದೇ ಪದೇ ಅವನನ್ನು ಗೇಲಿ ಮಾಡುವಳು. ಎರಡನೆಯ ಭಾಗದಲ್ಲಿ ಈಕೆಯನ್ನು ಪ್ರಧಾನ ಪಾತ್ರವರ್ಗಕ್ಕೆ ಏರಿಸಲಾಗುತ್ತದೆ. ಲೇಖಕರು ಆಕೆಗಾಗಿ ಪ್ರತಿಯೊಂದು ಕಂತಿನಲ್ಲಿಯೂ ಉತ್ತಮ ಗುಣಮಟ್ಟದ ಕಥಾವಸ್ತುವನ್ನು ನೀಡಲು ವಿಫಲರಾದ ಕಾರಣ ಪುನಃ ಮೊದಲಿನ ಪಾತ್ರಕ್ಕೇ ಇವಳು ಇಳಿಯಬೇಕಾಗುತ್ತದೆ. == ಕಂತುಗಳು == == ನಿರ್ಮಾಣ ಇತಿಹಾಸ == 2006-07 ದೂರದರ್ಶನ ಭಾಗಕ್ಕಾಗಿ ರಚಿಸಲಾದ ಈ ಸರಣಿಯ ಆರಂಭಿಕ ಯೋಜನೆಯು ಇಂದಿನದಕ್ಕಿಂತಲೂ ಗಮನಾರ್ಹವಾಗಿ ಭಿನ್ನವಾಗಿತ್ತು. ಅಂದಿನ ಪಾತ್ರವರ್ಗದಲ್ಲಿ ಕೇವಲ ಜಿಮ್‌ ಪಾರ್ಸನ್ಸ್‌ ಮತ್ತು ಜಾನಿ ಗ್ಯಾಲೆಕಿ ಇದ್ದರು. ಅವರ ನೆರೆಯವಳಾದ ಪೆನ್ನಿಯದು (ಈಗ ಕೇಲೀ ಕ್ವೋಕೊ ನಿರ್ವಹಿಸುತ್ತಿರುವ ಪಾತ್ರ) ತೀರ ಕೆಳ ಮಟ್ಟದ ಪಾತ್ರವಾಗಿತ್ತು. ಈ ಸರಣಿಯನ್ನು ಆಯ್ಕೆ ಮಾಡಲಿಲ್ಲ; ಆದರೆ, ಅದರ ಮರುಪರಿಶೀಲಿಸಿ ಉಳಿದ ಮುಖ್ಯ ಪಾತ್ರವರ್ಗದವರನ್ನು ಸೇರಿಸಿಕೊಂಡು ಪ್ರಸ್ತುತ ರೂಪಕ್ಕೆ ಪರಿವರ್ತಿಸಲು ನಿರ್ಮಾಪಕರರಿಗೆ ಅವಕಾಶ ನೀಡಲಾಯಿತು. ದಿ ಬಿಗ್‌ ಬ್ಯಾಂಗ್‌ ಧಿಯರಿ ಯ ಎರಡನೆಯ ಯೋಜನೆಯನ್ನು ಜೇಮ್ಸ್‌ ಬರೋಸ್‌ ನಿರ್ದೇಶಿಸಿದರು. ಇವರು ಸರಣಿಯೊಂದಿಗೆ ಮುಂದುವರೆಯಲಿಲ್ಲ. ಈ ಪರಿಷ್ಕೃತ ಯೋಜನೆಯು 2007ರ ಮೇ 14ರಂದು CBSನಿಂದ 13 ಕಂತುಗಳ ಆರ್ಡರನ್ನು ಗಳಿಸಲು ಎಡೆಮಾಡಿತು. CBSನಲ್ಲಿ ಪ್ರಸಾರವಾಗುವ ಮುಂಚೆ ಪ್ರಾಯೋಗಿಕ ಕಂತನ್ನು (ಪೈಲಟ್‌ ಎಪಿಸೊಡ್‌) ಮೂಲಕ ಉಚಿತವಾಗಿಈ ಸರಣಿಯು 2007ರ ಸೆಪ್ಟೆಂಬರ್‌ 24ರಂದು ಪ್ರಥಮ ಪ್ರದರ್ಶನ ಕಂಡು, 2007ರ ಅಕ್ಟೋಬರ್‌ 19ರಂದು ಪೂರ್ಣ ಪ್ರಮಾಣದ 22 ಕಂತುಗಳ ಪ್ರಸಾರಕ್ಕಾಗಿ ಆಯ್ಕೆಯಾಯಿತು. 2007-2008 ರೈಟರ್ಸ್‌ ಗಿಲ್ಡ್‌ ಆಫ್‌ ಅಮೆರಿಕಾ ಮುಷ್ಕರದ ಕಾರಣ ಈ ಸರಣಿಯ ನಿರ್ಮಾಣವು 2007ರ ನವೆಂಬರ್‌ 6ರಂದು ಸ್ಥಗಿತಗೊಂಡಿತು. ಅಂತಿಮವಾಗಿ 2008ರ ಮಾರ್ಚ್‌ 17ರಂದು ಪುನಃ ಆರಂಭವಾಯಿತು. ಇದು ಹಿಂದಿನಕ್ಕಿಂತ ಮುಂಚಿನ ಸಮಯದಲ್ಲಿ ಪ್ರಸಾರಕ್ಕಾಗಿ ಸ್ಥಾನ ಗಿಟ್ಟಿಸಿತು. ಜೊತೆಗೆ ಒಂಬತ್ತು ಹೊಸ ಕಂತುಗಳು ಇದಕ್ಕೆ ಸೇರ್ಪಡೆಯಾಯಿತು. ಮುಷ್ಕರ ಕೊನೆಗೊಂಡ ನಂತರ, 2008-2009 ಎರಡನೇ ಎರಡನೆ ಬಾರಿಯ ಪ್ರಸಾರಕ್ಕಾಗಿ ಆಯ್ಕೆಯಾಯಿತು. 2008ರ ಸೆಪ್ಟೆಂಬರ್‌ 22ರಂದು ಅದೇ ಸಮಯಕ್ಕೆ ಸರಣಿಯ ಪ್ರಥಮ ಪ್ರದರ್ಶನವಾಯಿತು. ಇದರ ಜನಪ್ರಿಯತೆ ಹೆಚ್ಚುತ್ತಿದು, ಸರಣಿಯು 2010-11ರ ಅವಧಿಗೂ ಎರಡು ವರ್ಷಗಳ ಅವಧಿಯ ನವೀಕರಣೆಯನ್ನು ಪಡೆಯಿತು. ಲಾಸ್‌ ಏಂಜಲೆಸ್‌ನಲ್ಲಿರುವ ಕ್ಯಾಪಿಫೊರ್ನಿಯಾ ವಿಶ್ವವಿದ್ಯಾನಿಲಯದಲ್ಲಿರುವ ಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನ ಪ್ರಾಧ್ಯಾಪಕರಾದ ಡೇವಿಡ್‌ ಸಾಲ್ಜ್‌ಬರ್ಗ್‌ ಚಿತ್ರಕಥೆಯನ್ನು ಪರಿಶೀಲಿಸಿ, ಸಂವಾದ, ಗಣಿತ ಸಮೀಕರಣ ಮತ್ತು ರೇಖಾಚಿತ್ರಗಳನ್ನು ಸರಣಿಯ ಆಸರೆಯಾಗಿ ನೀಡುವರು. ಕಾರ್ಯಕಾರಿ ನಿರ್ಮಾಪಕ ಮತ್ತು ಸಹ-ರಚನಕಾರ ಬಿಲ್‌ ಪ್ರ್ಯಾಡಿಯವರ ಪ್ರಕಾರ, "ಷೆಲ್ಡನ್‌ಗೆ ವಾಸ್ತವಿಕವಾದ ಸಮಸ್ಯೆಯನ್ನು ನೀಡಿ, ಆತನು ಮೊದಲ ಭಾಗದುದ್ದಕ್ಕೂ ಅದನ್ನು ಬಿಡಿಸಲೆಂದು ಯೋಜಿಸಿದ್ದೇವೆ. ಈ ಮೂಲಕ ರಂಗಸಜ್ಜಿಕೆಯತ್ತ ಒಂದು ನೈಜ ಪ್ರಗತಿಯನ್ನು ಕಾಣಬಹುದಾಗಿದೆ... ಈ ಎಲ್ಲ ಸಂಗತಿಗಳೂ ಸರಿಯಾದ ರೀತಿಯಲ್ಲಿ ತರಲು ನಾವು ಶ್ರಮವಹಿಸಿದೆವು." == ಆರಂಭಿಕ ಆವರ್ತಕ ರಾಗ == ಬೇರ್ನೇಕೆಡ್‌ ಲೇಡೀಸ್‌ ಕಥಾ ವಸ್ತುವಿನ ಹಾಡನ್ನು (ಥೀಮ್‌ ಸಾಂಗ್‌) ಬರೆದು ಧ್ವನಿಮುದ್ರಣ ಮಾಡಿದರು. ಈ ಹಾಡು ಆದಿಯಿಂದಲೂ ವಿಶ್ವ ಏನೇನು ಪರಿವರ್ತನೆಗೆ ಒಳಗಾಯಿತು ಎಂಬುದನ್ನು ವಿವರಿಸುತ್ತದೆ. ಸಮಯದ ಆರಂಭದಿಂದ ಬ್ರಹ್ಮಾಂಡದಲ್ಲಿ ಸಂಭವಿಸಿದ ಬೆಳವಣಿಗೆಗಳನ್ನು ವಿವರಿಸುತ್ತದೆ. 2007ರ ಅಕ್ಟೋಬರ್‌ 9ರಂದು, ಹಾಡಿನ ಸವಿಸ್ತಾರವಾದ ಆವೃತ್ತಿಯನ್ನು (1 ನಿಮಿಷ 25 ಸೆಕೆಂಡ್‌ಗಳು) ಬಿಡುಗಡೆ ಮಾಡಲಾಯಿತು. ಐದು ಅತಿ ಪ್ರಭಾವಿ ವಿಷಯದ ಹಾಡುಗಳಲ್ಲಿ ಈ ಕಥಾ ಹಂದರದ ಹಾಡು ಒಂದಾಗಿದ ಎಂದು ವಿಮರ್ಶಕಿ ಸಮಂತಾ ಹೊಲೊವೇ ಪರಿಗಣಿಸಿದರು. == ಬಿಡುಗಡೆಗಳು == == ಜನಪ್ರಿಯತೆಯ ಅಂದಾಜು (ರೇಟಿಂಗ್ಸ್‌‌) == === .. ಪ್ರಮಾಣಿತ ಜನಪ್ರಿಯತೆಯ ಅಂದಾಜುಗಳು === ಕೆಳಕಂಡ ಸಂಕ್ಷಿಪ್ತ ತಾತ್ಪರ್ಯ: "ಜನಪ್ರಿಯತೆಯ ಅಂದಾಜು" ಎಂದರೆ, ದೂರದರ್ಶನಗಳನ್ನು ಹೊಂದಿರುವ ಎಲ್ಲ ಮನೆಗಳಲ್ಲಿಯೂ ಸರಣಿಯನ್ನು ವೀಕ್ಷಿಸಲಾಗುತ್ತಿರುವುದು; ಹಾಗೂ, ಪಾಲು ಎಂದರೆ, ಸರಣಿಯನ್ನು ವೀಕ್ಷಿಸಲಾದ ಆ ಸಮಯದಲ್ಲಿ ಬಳಕೆಯಲ್ಲಿರುವ ದೂರದರ್ಶನಗಳ ಶೇಕಡಾವಾರು. "18-49" ಎಂದರೆ ಸರಣಿಯನ್ನು ವೀಕ್ಷಿಸುವ 18ರಿಂದ 49ರ ವಯಸ್ಕರ ಶೇಕಡಾವಾರು. "ವೀಕ್ಷಕರು" ಎಂದರೆ, ಆ ಸಮಯದಲ್ಲಿ ಸರಣಿಯನ್ನು ವೀಕ್ಷಿಸುತ್ತಿರುವ ವೀಕ್ಷಕರ ಸಂಖ್ಯೆ (ದಶಲಕ್ಷ ಪ್ರಮಾಣದಲ್ಲಿ). "ಶ್ರೇಣಿ" ಎಂದರೆ, ಆ ವಾರದಲ್ಲಿ ಪ್ರಸಾರಗೊಂಡ ಇತರೆ ಸರಣಿಗಳಿಗೆ ಹೋಲಿಸಿದಾಗ ಸರಣಿಯ ಶ್ರೇಷ್ಠತೆ ಎಂಬುದರ ಬಗ್ಗೆ. === ಕಂತುಗಳ ಜನಪ್ರಿಯತೆಯ ಅಂದಾಜು === ವಾಹಿನಿಯಲ್ಲಿ ಪ್ರಸಾರವಾದ ದಿ ಬಿಗ್‌ ಬ್ಯಾಂಗ್‌ ಧಿಯರಿ ಯ ಪ್ರತಿ ಕಂತಿಗೆ ಒಟ್ಟು ವೀಕ್ಷಕರ ಸಂಖ್ಯೆ ಸರಾಸರಿ ಜನಪ್ರಿಯತೆಯ ಆಧಾರಿತ : ! |} === ವಿತರಣೆ ಮತ್ತು ಜನಪ್ರಿಯತೆ === 2008ರ ಫೆಬ್ರುವರಿ 14ರಂದು, "ದಿ ಬಿಗ್‌ ಬ್ಯಾಂಗ್‌ ಥಿಯರಿ" ಸರಣಿಯು UKದ ಚಾನೆಲ್‌ 4 ವಾಹಿನಿಯಲ್ಲಿ ತನ್ನ ಮೊದಲ ಪ್ರದರ್ಶನವಾಯಿತು. ಇದರ ವೀಕ್ಷಣಾ ಸರಾಸರಿ 1.0 ದಶಲಕ್ಷವಾಗಿತ್ತು. ಅದರ ಮುಂದಿನ ವಾರ ಪ್ರಸಾರವಾದ ಎರಡನೆಯ ಕಂತಿಗೂ ಸಹ 1.0 ದಶಲಕ್ಷ ವೀಕ್ಷಕರಿದ್ದರು.ಮೂರನೆಯ ಕಂತಿಗೆ,ಸರಾಸರಿ 1.1 ದಶಲಕ್ಷ ವೀಕ್ಷಕರು ಸ್ಪಂದಿಸಿದರು. ಹಿಂದಿನ ಸಂಜೆ ಚಾನೆಲ್‌ 4ರ ಡಿಜಿಟಲ್‌ ಶಾಖೆಯಾದ E4 ವಾಹಿನಿಯಲ್ಲಿ ಈ ಸರಣಿಯು "ಮೊದಲ ನೋಟ"ದ ರೂಪದಲ್ಲಿ ಪ್ರಸಾರಗೊಂಡು, ಸರಾಸರಿ 400,000 ವೀಕ್ಷಕರು ಸಂದಿದ್ದಾರೆ. ಐದನೆಯ ಕಂತು 880,000 ವೀಕ್ಷಕರನ್ನು ಪಡೆಯಿತು. ಮೊದಲ ಐದು ಕಂತುಗಳ ಬಳಿಕ, ವೀಕ್ಷಕರ ಸಂಖ್ಯೆ ಸರಾಸರಿಯು 1 ದಶಲಕ್ಷದ ಮಟ್ಟದಲ್ಲಿಯೇ ಠಳಾಯಿಸುತ್ತಿದೆ. 13ನೆಯ ಕಂತನ್ನು 1.3 ದಶಲಕ್ಷ ವೀಕ್ಷಕರು ವೀಕ್ಷಿಸಿದರು ಮತ್ತು ಅದು ಅತಿ ಹೆಚ್ಚು ಜನರಿಂದ ವೀಕ್ಷಿಸಲಾದ ಕಂತಾಗಿತ್ತು. 2008ರ ಡಿಸೆಂಬರ್‌ ತಿಂಗಳಲ್ಲಿ, ವರ್ಜಿನ್‌ ಮೀಡಿಯಾ ತಮ್ಮ ಚಾಯ್ಸ್‌ ಆನ್‌ ಡಿಮ್ಯಾಂಡ್‌ ಸರ್ವಿಸ್‌ ವಾಹಿನಿಯಲ್ಲಿ ಮೊದಲ ಕಂತಿನ ಮೊದಲ ಒಂಬತ್ತು ಕಂತುಗಳನ್ನು ಲಭ್ಯಗೊಳಿಸಿತು. ಮೊದಲನೆಯ ಭಾಗದ ಉಳಿದ ಕಂತುಗಳನ್ನು 2009ರ ಜನವರಿ ತಿಂಗಳಲ್ಲಿ ಲಭ್ಯವಾಗುವಂತೆ ಮಾಡಿತು. == ಪ್ರಶಸ್ತಿಗಳು == === ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು === == ಅಂತಾರಾಷ್ಟ್ರೀಯ ಪ್ರಸಾರ == == ಆಕರಗಳು == == ಹೊರಗಿನ ಕೊಂಡಿಗಳು == @ ಐ ಎಮ್ ಡಿ ಬಿ . . . . ನಲ್ಲಿ ದಿ ಬಿಗ್‌ ಬ್ಯಾಂಗ್‌ ಧಿಯರಿ ದಿ ಬಿಗ್‌ ಬ್ಯಾಂಗ್‌ ಧಿಯರಿ ಆನ್‌ DVDಯ ಅಧಿಕೃತ ಜಾಲತಾಣ ದಿ ಬಿಗ್ ಬ್ಯಾಂಗ್‌ ಥಿಯರಿ ( ಸರಣಿ) . "ದಿ ಬಿಗ್‌ ಬ್ಯಾಂಗ್‌ ಧಿಯರಿ"ಯ ವ್ಯಾನಿಟಿ ಕಾರ್ಡ್ಸ್‌ ಅರ್ಕೈವ್‌